ವ್ಯಕ್ತಿ ಕೊಟ್ಟ ನೋವು, ಮಾಡಿದ ಅವಮಾನ ಎಲ್ಲವನ್ನು ಲೆಕ್ಕ ಹಾಕುತ್ತದೆ. ಆದ್ರೆ ಮನಸ್ಸು ಗಣಿತದಲ್ಲಿ ತುಂಬಾ weak. ಅದಕ್ಕೆ ಭಾವನೆಯೇ ಭಾಗಾಕಾರ,
ಗುಣವಂತಿಕೆಯೇ ಗುಣಾಕಾರ, ಪ್ರೀತಿಸಿರುವರ ಸಂತೋಷವೆ ಸಂಕಲನ, ತಲೆಯಲ್ಲಿ ಕೂತಿರುವ ಹಲವು ಸಮಸ್ಯೆಗೆಳಿಗೆ ವ್ಯವಕಲನ.
ಕೆಲವೊಮ್ಮೆ ನಾವು ಭಾವುಕರಾದಾಗ ನಮ್ಮ ಮಿತ್ರರು "be practical" ಅಂತ ಹೇಳಿರೋದನ್ನ ಕೆಳೀರ್ತಿರಿ. ಇನ್ನು ಕೆಲವು ಸಂದರ್ಭಗಳಲ್ಲಿ
"think from heart not from brain" ಅಂತಾನು ಕೇಳಿರ್ತೀರಿ. ಹಾಗಾದ್ರೆ ಯಾವುದು ಸರಿ? ಇದಕ್ಕೆ ಉತ್ತರ ಆ ದೇವರಿಗೂ, ದೇವರಾಣೆ ಗೊತ್ತಿರೋಲ್ಲ. ಈ ತಲೆ ಮತ್ತು ಮನಸ್ಸು ಇವೆರಡರ ಗುದ್ದಾಟ ನಾವು ಜನಿಸಿದ ಮರುಕ್ಷಣದಿಂದ ಸಾಯುವ ಕೊನೆಕ್ಷಣದವರೆಗು ನಡಿತಾನೆ ಇರುತ್ತೆ. ಯಾವ ಮನುಷ್ಯ ತುಂಬಾ
ಸಂತೊಷವಾಗಿದ್ದನೋ, ಅವನು ಸಂದರ್ಭಕ್ಕೆ ಯೋಗ್ಯವಾಗಿ ತಲೆಯ ಅಥವಾ ಮನಸಿನ ಮಾತನ್ನು ಕೇಳಿರ್ತಾನೆ. ಇನ್ನು ದು:ಖ ಅನುಭವಿಸೋನು ತಲೆ ಜಾಗಕ್ಕೆ
ಮನಸನ್ನೋ ಅಥವಾ ಮನಸಿನ ಜಾಗಕ್ಕೆ ತಲೆಯನ್ನೋ ಉಪಯೋಗಿಸಿರ್ತಾನೆ.
ಈ ಹಗ್ಗ ಜಗ್ಗಾಟದಲ್ಲಿ ಲಾಭ ನಷ್ಟ ಮಾತ್ರ ನಿರ್ಧಾರ ಮಾಡಿದ ವ್ಯಕ್ತಿಗೆ ಮಾತ್ರ.... ವಿಚಿತ್ರ ಅಲ್ವ?
ಈ ತರಹದ ಅನುಭವ ನಿಮಗಾಗಿದ್ದರೆ ವಿಮರ್ಶಿಸಿ... ಈಗ ನನ್ನ ತಲೆ ಹೇಳ್ತಾ ಇದೆ
"ನಿದ್ದೆ ಮಾಡೋ ಮಗನೆ" ...
ಮತ್ತೇ ಸಿಗ್ತ್ಹಿನಿ.....
Hmmm to be thought of anta topic bardidiri very good keep it up :D
ReplyDeleteThis leaves me confused about whether I am thinking from heart or just being practical
:D
ಮನಸ್ಸಿನ ಮಾತು ಕೇಳೋಕ್ಕಾಗಲ್ಲ, ತಲೆಲಿರೋದೇ ಬೇರೋಂದು
ReplyDeleteಹಾಗೆ ಮನಸ್ಸಲಿರೋದು ಇನ್ನೊಂದು ಹಾಗೆ ಜೀವನ