ಸಂಬಳ ಮತ್ತು ಕಂಪನಿಯ ಸಹದ್ಯೋಗಿಗಳು. ಇವನಿಗೆ ಧೂಮ್ರಪನದ ಗಂಧ ಗಾಳಿ ಗೊತ್ತಿಲ್ಲ,
ಬೀರು, ರಮ್ಮು ಇತ್ಯಾದಿ ಪಾನೀಯಗಳ ರುಚಿ ಗೊತ್ತಿಲ್ಲ. ಆಗಾಗ ಸಿನಿಮಾ ಹೋಗುವ ಹುಚ್ಚು. ಅದೂ ಅತಿ ವಿರಳ. ಮನದಲ್ಲೇನೋ ಯಾರಿಗೂ ಹೇಳಲಾರದ ಭಾವನೆಗಳು. ಆ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಪುಟ್ಟ ಜೀವ ಕೂಡ ಇಲ್ಲದ ನತದೃಷ್ಟ. ದಿನವೆಲ್ಲ ಖುಷಿಯಿಂದ ಓಡಾಡುವ ಇವನಿಗೆ, ಸಂಜೆ ಕ್ಯಾಬ್ ಹತ್ತಿದ ಮರುಕ್ಷಣ ಯಾವುದೊ ಕಾಣದ ಮೌನ ಆವರಿಸುತ್ತದೆ. ನಿನ್ನೆ ಕೂಡ ಇವನಿಗೆ ಆ ಮೌನ ಕಾಡಿದ್ದಿರಬೇಕು. ಬಹಳ ದಿನಗಳ ನಂತರ ಯಾರ
ಜೊತೆಯಾದರು ಮಾತಾಡೋಣ ಅನ್ನೋ ಯೋಚನೆಯಿಂದ facebook ತೆರೆದು ಕೂತಿದ್ದಾನೆ. ಬಹಳಷ್ಟು ಜನಕ್ಕೆ ಇವನ ಫೇಸ್ ಮರೆತುಹೋಗಿದೆ. ಇವನ ಅದೃಷ್ಟಕ್ಕೆ ಯಾರೊಬ್ಬರೂ ಆನ್ಲೈನ್ ಸಿಕ್ಕಿಲ್ಲ. ಬಹು ಬೇಸರಗೊಂಡ ಇವನಿಗೆ ಮರಭೂಮಿಯಲ್ಲಿ ಓಯಸಿಸ್ ಕಂಡಂತೆ ಒಬ್ಬ ಹಳೇ ಸ್ನೇಹಿತ ಹಸಿರು ಬತ್ತಿಯೊಂದಿಗೆ ಆನ್'ಲೈನ್ ಕಾಣಿಸ್ತಾನೆ. ಆದ್ರೆ ಇವನ hi ... hello ... ಗೆ ಉತ್ತರ ಮಾತ್ರ ಬರೋಲ್ಲ.
ಛೇ... ಯಾರು ನನಗೆ ಬೇಕಾದಾಗ ಮಾತಾಡೋಲ್ಲ. ಅಷ್ಟರಲ್ಲಿ ಕುಕ್ಕರ್ ಸೀಟಿ ಹೊಡಿಯುತ್ತೆ, ಮತ್ತು ಇವನ ಯೋಚನೆಗೂ ಕೂಡ ತೆರೆ ಬೀಳುತ್ತೆ. ಕೈಯಲ್ಲಿ
ಹಿಡಿದುಕೊಂಡು ಕೂತಿರುವ ಇಂಟರ್ನೆಟ್ ಬಿಲ್ ಕಟ್ಟಿ ನಾಳೆಯಿಂದ ಫ್ರೆಂಡ್ಸ್
ಜೊತೆ ಚಾಟ್ ಮಾಡೋಣ ಅಂತಾನೆ. !!!!
No comments:
Post a Comment