ಈ IT ಮತ್ತು BT ಜನಕ್ಕೆ ಶುಕ್ರವಾರ ಬಂತೆಂದರೆ ಸಾಕು ಊರಿಗೆ ಓಡುವ ಕಾಯಕ. ನಾನು ಮಾತಾಡುತ್ತಿರುವುದು ಬೇರೆ ಊರಿನಿಂದ ಕೆಲಸದ ನಿಮಿತ್ಯ ಬೆಂಗಳೂರಿಗೆ ಬಂದ ಜನರ ಬಗ್ಗೆ. ನಾನು ಆ ಗುಂಪಿಗೆ ಸೇರಿದವನು. ಊರಿಗೆ ಹೋಗುವ ಆತುರ, ಆಸೆ ಎಷ್ಟಿರುತ್ತೋ ಅಷ್ಟೇ ಆಸೆ ದುಡ್ಡು ಉಳಿಸುವುದರಲ್ಲಿ ಕೂಡ ಇರುತ್ತೆ. ಬಸ್ಸಿಗೆ ಹೋದ್ರೆ ನಾನು ಕೊಡಬೇಕಾದದ್ದು 400
ರೂಗಳು. ಅದೇ ಟ್ರೈನ್ ಗೆ ಹೋದರೆ ಕೇವಲ 216 ರೂಗಳು. ಅದಲ್ಲದೆ ಉದ್ದ ಕಾಲು ಇರುವ ನನ್ನಂಥವರಿಗೆ ಬಸ್ ಪ್ರಯಾಣ ನಿಷಿದ್ಧ. ಯಾಕೆಂದ್ರೆ ನಾನು ಕಾಲು ಚಾಚಿ ಕುಳಿತರೆ, ನನಗೆ ತಿಳಿಯದ ಹಾಗೆ ಮುಂದಿನ ಸೀಟ್ ನ ಅರ್ಧ ಜಾಗವನ್ನು ಆಕ್ರಮಿಸಿಕೊಂಡು ಬಿಡುತ್ತೇನೆ. ಹಾಗಾಗಿ 99 ಪ್ರತಿಶತ: ನಾನು ಓಡಾಡುದುವುದು ಟ್ರೈನ್ ನಲ್ಲೆ.
ಶುಕ್ರವಾರ ಸಂಜೆ 6.00, ಆಫೀಸ್ ನಿಂದ ಹೊರಟು 9 .15 ಕ್ಕೆ ರಾಣಿ ಚೆನ್ನಮ್ಮ ಎಕ್ಷ್ಪ್ರೆಸ್ಸಗೆ ನಾನು ಪ್ರಯಾಣ ಮಾಡಬೇಕಿತ್ತು. ಆವತ್ತಿನ ವಿಶೇಷ ಅಂದ್ರೆ ನಾನು ಮತ್ತು ನನ್ನ ಇನ್ನೋರ್ವ ಗೆಳೆಯನ ಟಿಕೆಟ್ confirm ಆಗಿರಲಿಲ್ಲ. ರೈಲ್ವೆ ಸ್ಟೇಷನ್ ಗೆ ಹೋದಾಗ ನಮಗೆ RAC ಸಿಕ್ಕಿತ್ತು. ಅಂತು ಇಂತೂ ಟ್ರೈನ್ ಏರಿದ ನಾವು ನಮಗೆ ಕೊಟ್ಟ ಸೀಟಿನಲ್ಲಿ ಕುಳಿತುಕೊಂಡೆವು. ಬಹಳ ಸಲ RAC ಇಂದ ಬರ್ತ್ ಮಾಡಿಸಿಕೊಂಡ ಅನುಭವವಿದ್ದ ನನಗೆ, ಇವತ್ತು ಹಾಗೆ ಮಾಡೋಣ ಅನ್ನೋ ಮೊಂಡು ಧೈರ್ಯ.
TC ಬಂದು ನಮ್ಮ ಟಿಕೆಟ್ ನೋಡಿ, sign ಮಾಡಿದ, ನಾನು ಅವನಿಗೆ ವಿನಮ್ರತೆಯಿಂದ ಕೇಳಿದೆ "ಸಾರ್, ಬರ್ತ್ ಏನಾದ್ರೂ ಕೊಡೋಕೆ ಆಗುತ್ತ?" ಎರಡು ನಿಮಿಷ ನನ್ನ ನುಂಗೋ ಥರ ನೋಡಿದ ಆತ "ಇಲ್ಲಿ ಆಗಲ್ಲ ಸರ್, ಎಲ್ಲ ಅಲ್ಲೊಟ್ ಆಗಿದೆ. ನಿಮಗೆ ಬರ್ತ್ ಬೇಕು ಅಂದ್ರೆ S9 ಬೋಗಿಗೆ ಹೋಗಿ" ಅಂದ. ಅಸ್ಟು ಹೇಳಿದ್ದೆ ತಡ, ತುಮಕೂರು ಸ್ಟೇಷನ್ ಬಂದ ತಕ್ಷಣ ಬ್ಯಾಗ್ ಎತ್ತಿಕೊಂಡು S9 ಬೋಗಿಗೆ ದೌಡಾಸಿದೆವು. ಬೋಗಿ ಒಳಗೆ ಹೋಗಿ ನೋಡಿದರೆ ಒಳ್ಳೆ ಅಶೋಕ ಫಿಲಂನ climax ಥರ ಇತ್ತು. ಎಲ್ಲರು ಗಾಢ ನಿದ್ರೆಯಲ್ಲಿದ್ದಾರೆ. ಯಾವುದೇ ಬರ್ತ್ ಖಾಲಿ ಇರುವ ಸುಳಿವು ಕೂಡ ಅಲ್ಲಿರಲಿಲ್ಲ.
ಛೇ.. ಎಂಥ ಕೆಲಸ ಆಯಿತು.. ಸರಿ ನಮ್ಮ ಬೋಗಿಗೆ ವಾಪಸ್ ಹೋಗೋಣ ಅಂದ ನನ್ನ ಫ್ರೆಂಡ್. ವಾಪಸ್ ಬಂದೆವು. ಅಲ್ಲಿ ನೋಡಿದ್ರೆ ನಮ್ಮ RAC ಸೀಟ್'ಗಳು ಯಾರಿಗೋ ಬರ್ತ್ ಆಗಿ ಹೋಗಿವೆ. ಒಳಹೊಕ್ಕು ಕೇಳಿದ್ರೆ, TC ಆ ಸೀಟ್'ನ ಅವರಿಗೆ ಕೊಟ್ಟಾಗಿದೆ.ಇನ್ನುಅವರ ಜೊತೆ ಜಗಳವಾಡಿ ಪ್ರಯೋಜನ ಇಲ್ಲ ಅಂತ ತಿಳಿದು. TC ಹತ್ರ ಬಂದೆವು (ಮತ್ತೆ S9!!!!). ಅವನ ಹತ್ರ ಸಿಕ್ಕ ಉತ್ತರ ಕೇಳಿ ಸಂತಾಪವಾಯಿತು. "S1 - S5 ಬೇರೆ tc ದು, ಅವರನ್ನೇ ಕೇಳಿ". ಆಗ ಘಂಟೆ ರಾತ್ರಿ 11 .30. ಈ ಹೊತ್ತಿನಲ್ಲಿ tc ನಮಗೆ ಸಿಗ್ತಾನೆ ಅನ್ನೋ ನಂಬಿಕೆ ನನಗಿರಲಿಲ್ಲ. ಸರಿ S8ಗೆ ಹೋಗಿ ನೋಡೋಣ ಅಂತ ಅಲ್ಲಿ ಹೋದ್ರೆ ಒಂದು ಆಶ್ಚರ್ಯ ಕಾಡಿತ್ತು. ಬೋಗಿಯ ಶೌಚಾಲಯದ ಪಕ್ಕದ ಲಾಬಿಯಲ್ಲಿ ೩ ಜನ ಯುವಕರು ಪೇಪರ್ ಹಾಸಿಕೊಂಡು ಕೂತಿದ್ದಾರೆ. ಅವರಲ್ಲೊಬ್ಬ ನಮ್ಮನ್ನ ನೋಡಿ ನಕ್ಕು "S9 ನಲ್ಲಿ ಬರ್ತ್ ಸಿಗುತ್ತೆ ಅಂತ ಕಳಿಸಿದ್ನಾ tc" ಅಂತ ಕೇಳಿದ. ಆಗಲೇ ನನಗೆ ಅರಿವಾಗಿದ್ದು, ನಮ್ಮ ಹಾಗೆ ಅವರು ಕೂಡ ಮೋಸ ಹೋಗಿದ್ದರು :). ಅವರ ಹತ್ರ ಇದ್ದ ಪೇಪರ್ ತೆಗೆದುಕೊಂಡು ನಾವು ಅಲ್ಲೇ ಕೂರುವುದಾಗಿ ನಿರ್ಧರಿಸಿದೆವು.
ಮೊದಲೇ ಮಾತು, ಜನ ಅಂದ್ರೆ ಸಾಕು. ನನಗೆ ನಿದ್ರೆ ನೀರಡಿಕೆಗಳ ಅರಿವೇ ಇರುವುದಿಲ್ಲ. ಏನೇನೋ ಹರಟೆ, ಜೋಕ್ಸು, ಕಥೆಗಳು, ಅನುಭವಗಳು, ಆಗ ತಾನೆ ಮೋಸಹೋಗಿದ್ದ ಪರಿ ಎಲ್ಲದರ ಬಗ್ಗೆ ಮಾತಾಡುತ್ತ ನಗುತ್ತ ಕೂತು ಬಿಟ್ಟೆವು. ನಮ್ಮ ಮಾತುಗಳು ಮಲಗಿರುವವರಿಗೆ ತೊಂದರೆ ಮಾಡಬಹುದು ಅನ್ನೋದರ ಅರಿವು ಕಿಂಚಿತ್ತಾಗಿ ನಮಗೆ ಬರಲಿಲ್ಲ. ಹೀಗೆ ನಮ್ಮ ಮಾತುಗಳು ಮುಂದುವರಿದಾಗ ಪಕ್ಕದ ಬರ್ತ್ ನಲ್ಲಿ ಮಲಗಿದ್ದ ಡುಮ್ಮ ಒಬ್ಬ "kyon, sona nahi hai kya" ಅಂತ ಕೇಳಿದ್ದ. ಅದಕ್ಕೆ ಒಕ್ಕೊರಲಿನಿಂದ ನಾವು ಉತ್ತರಿಸಿದ್ದು "ನಹಿ". ನಮ್ಮ ಒಕ್ಕಟ್ಟಿನ ದನಿ ಕೇಳಿ ಮತ್ತೆ ಮುಸುಕು ಹೊದ್ದಿಕೊಂಡು ಆತ ಮಲಗಿದ್ದ. ನಮ್ಮ ಉತ್ತರ ತಕ್ಕ ಮಟ್ಟಿಗೆ ನಿಷ್ಠೂರವೆನಿಸಿದರೂ, ಆ ಪರಿಸ್ಥಿತಿಯಲ್ಲಿ ಅದು ಸರಿ ಎನ್ನಿಸಿತು.
ಆಮೇಲೆ ಬೆಳಿಗ್ಗೆ ೨ ಗಂಟೆವರೆಗೆ, ಯಾರನ್ನೂ ಆ ಶೌಚಾಲಯದ ಹತ್ರ ಹೋಗೋಕೆ ಬಿಡಲಿಲ್ಲ. ಕಾರಣ ಗೊತ್ತಲ್ಲ.
ಕೊನೆಗೂ ಪ್ರಯಾಸಪೂರ್ಣ ಪ್ರಯಾಣಕ್ಕೆ ಅಂತ್ಯ ಸಿಕ್ಕಿತ್ತು. ಆದ್ರೆ ನನ್ನ ಮಸ್ತಿಷ್ಕದಲ್ಲಿ ಪ್ರಯಾಣದ ನೆನಪು ಉಳಿದುಕೊಂಡಿತ್ತು.
ಇನ್ನೊಂದು ನೆನಪಿನೊಂದಿಗೆ ಮತ್ತೆ ಸಿಗ್ತೇನೆ.
ROFL, Thats the beauty of journey :D
ReplyDeleteSuper.. ಅಶೋಕ ಫಿಲಂನ climax ಥರ ಇತ್ತು still laughing..
ReplyDelete