ಹೊಸ ವರ್ಷದ ಸಂಕಲ್ಪ(resolution) ಏನಪ್ಪಾ ಅಂದ್ರೆ, ನಾನು ನನಗೆ ಅತಿ ಪ್ರಿಯವಾದ ಚಹಾ ಸೇವನೆ ನಿಲ್ಲಿಸಿದೆ. ಈ ಚಹಾ'ದ ಬಗ್ಗೆ ಉತ್ತರ ಕರ್ನಾಟಕದವರನ್ನ ಕೇಳಿ. ಅಲ್ಲಿ ಮನೆಗೆ ಬಂದವರಿಗೆ ಅದ್ಧೂರಿ ಊಟ ಕೊಡದಿದ್ದರೂ ಓಕೆ, ಆದರೆ ಚಹಾ ಕೊಡದೆ ಇದ್ದರೆ ನಡೆಯೋದಿಲ್ಲ. ಎಲ್ಲರಿಗೂ ಚಹದ ಮೇಲಿನ ವ್ಯಾಮೋಹ ಮತ್ತು ನಂಟು ಅಂತಹದು. ಸರಿ, ಹೊತ್ತಿಲ್ಲದ ಹೊತ್ತಿನಲ್ಲಿ ಚಹದ ಬಗ್ಗೆ ಏಕೆ ಮಾತಾಡ್ತಾ ಇದ್ದೀನಿ ಅಂತೀರ? ಕಾರಣ ಇದೆ.
ಕೊನೆಯ ಸೆಮಿಸ್ಟರ್'ನ ಪ್ರಾಜೆಕ್ಟ್ ಮಾಡಲು, ನಾನು ಬೆಂಗಳೂರಿಗೆ ಬಂದ ಮೊದಲ ದಿನಗಳವು. ನಮ್ಮ ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕ. ಅವರಿಗೆ ನಾನು ಭಾರವಾಗಬರದು ಅನ್ನೋ ಭಾವನೆ ಆಗಲೇ ನನ್ನಲ್ಲಿ ಬೆಳೆದಾಗಿತ್ತು. ಬೆಂಗಳೂರಿನಲ್ಲಿ ಇರಲಿಕ್ಕೆ ಯಾವುದೇ ಸೌಕರ್ಯಗಳಿರಲಿಲ್ಲ. ಕೆಲವು ಸಂಬಂಧಿಗಳ ಮನೆಗಳಿದ್ದವು, ಆದರೆ ಅವರ ಮನೆಯಲ್ಲಿ ಕೂಡ ಇರುವುದಕ್ಕೆ ನನ್ನ ಸ್ವಾಭಿಮಾನ ಅಡ್ಡಿ ಬರುತ್ತಿತ್ತು. ಆಗ ನನ್ನ ಪಾಲಿಗೆ ಪಂಚಮ್ರುತವಾಗಿ ಕಂಡಿದ್ದು ABVPಯ ಆಫೀಸ್. ಬಂದ ಮಾರನೇ ದಿನವೇ ನನಗಾದ ಒಂದು ಅನುಭವ ಅದ್ಭುತವಾದುದು. ಬೆಳಿಗ್ಗೆ ಎದ್ದು ಹಲ್ಲುಜ್ಜಿ, ಅಲ್ಲೇ ಪಕ್ಕದಲ್ಲಿದ್ದ ಕಿಚನ್ ಒಳಗಡೆಯಿಂದ ಚಹಾ ವಾಸನೆ ಬಂತು. ಅತ್ಯಂತ ಆಸೆಯಿಂದ ಒಂದು ಗ್ಲಾಸ್ ಚಹವನ್ನು ಎತ್ತಿಕೊಂಡು ಇನ್ನೇನು ಕುಡಿಯಬೇಕು ಅನ್ನೋ ಅಷ್ಟರಲ್ಲಿ, ಅಲ್ಲಿದ್ದ ಒಬ್ಬ ಆಫೀಸ್ ಬಾಯ್ ನನಗೆ ಹೇಳಿದ ಮಾತು "ಟೀ ಪುಗಸೆಟ್ಟೆ ಸಿಗಲ್ಲಮ್ಮ... ಅದಕ್ಕೆ ಕೆಲಸ ಮಾಡ್ಬೇಕು." ಆಶ್ಚರ್ಯದಿಂದ ನಾನು ಕೇಳಿದೆ "ಏನು ಕೆಲಸ ?" ಅದಕ್ಕವನ ಉತ್ತರ "ಏನಿಲ್ಲ, ನೆಲ ಗುಡಿಸಿ, ಒರೆಸಿ ಸ್ವಚ್ಛಗೊಳಿಸಿದರೆ ಸಾಕು." ಜೀವನದಲ್ಲಿ ಯಾವುದೇ ಕೆಲಸವನ್ನು ನಾನು ಚಿಕ್ಕದ್ದು, ಅಥವಾ ಘನತೆಯನ್ನು ಕುಂದಿಸುವಂಥದ್ದು ಅಂದುಕೊಂಡಿದ್ದಿಲ್ಲ. ಹಾಗಾಗಿ ಅವನ ಮಾತು ನನಗೆ ಒಪ್ಪಿಗೆ ಆಯಿತು. ಇದಾದ ನಂತರ ನಾನು ಎಲ್ಲಿಯವರೆಗೆ ಅಲ್ಲಿದ್ದೇನೋ, ಪ್ರತಿದಿನವೂ ಟೀ ಕುಡಿಯುತ್ತಲೇ ಇದ್ದೆ. :)
ಇವತ್ತಿಗೆ ಆ ದಿನಗಳು ಕಳೆದು ೪ ವರ್ಷಗಳಾಗಿವೆ, ಆದರೂ "ಟೀ ಪುಗಸೆಟ್ಟೆ ಸಿಗಲ್ಲಮ್ಮ" ಅನ್ನೋ ಮಾತು ಮಾತ್ರ ನೆನಪಲ್ಲೇ ಉಳಿದಿದೆ. ನಾನು ಬೆಳೆಯಬೇಕು ಅನ್ನೋ ಹಂಬಲದ ಜೊತೆಗೆ ಇಂಥ ಅನೇಕ ಕಥೆಗಳು ನನ್ನ ಜೀವನಕ್ಕೆ ಅಂಟಿಕೊಂಡಿವೆ. ಅದಕ್ಕೆ ಹೇಳೋದಲ್ವ "Life is a best teacher " ಅಂತ!!!
I have read all your posts. awesome. surprises, twists, bitter-sweet turns... sihiyaada katheyalli sathyada kahiyanna beresi ondu thara gammattaada kashaya kudida haage annistu... keep writing...
ReplyDeleteinti nimma "Fan"
Nimma akkareya salugalannu odi tumba santoshvaayitu. Dhanyavaadagalu.
ReplyDeleteYavdu bestu antha decide madodu tumba kasta. Idu tumba ista ayithu.. comment madade mundakke hogalu sadhya agtha illa.. :-)
ReplyDelete