ಇವತ್ತು ಮಧ್ಯಾನ್ನ ನನ್ನ ಕಂಪನಿಯ ದೂರವಾಣಿ ಬಳಕೆ ಮಾಡಿದ ಪಟ್ಟಿ ಬಂತು. ಇದು ಪ್ರತಿ ತಿಂಗಳು ನಾವು ಉಪಯೋಗಿಸುವ ದೂರವಾಣಿ ಕರೆಗಳ ವಿವರಣೆ ಹೊಂದಿರುತ್ತೆ. ಇದರಲ್ಲಿ ನಾವು ಯಾರ ಜೊತೆ, ಎಸ್ಟೊತ್ತಿಗೆ, ಎಷ್ಟು ನಿಮಿಷ ಮಾತಾಡಿದ್ದೀವಿ ಅನ್ನೋ ಎಲ್ಲ ಮಾಹಿತಿ ಅದರಲ್ಲಿ ಇರುತ್ತೆ. ಈ ಒಂದು ವಾರದ ಹಿಂದ ನನ್ನ ವೈಯಕ್ತಿಕ ದೂರವಾಣಿಯ ಕರೆಗಳ ವಿವರ ಕೂಡ ಬಂತು. ಎರಡನ್ನೂ ಒಂದು ದಿನ ಒಟ್ಟಿಗೆ ನೋಡಿದಾಗ ಒಂದು ಆಶ್ಚರ್ಯಕರ ಸಂಗತಿ ಗೋಚರಿಸಿತು. ನಾನು ವೈಯಕ್ತಿಕ ದೂರವಾಣಿಯಲ್ಲಿ ಒಂದು ತಿಂಗಳಲ್ಲಿ ಮಾತನಾಡಿದ್ದು ಕೇವಲ ೩ ಗಂಟೆ. ಅದೇ ಕಚೇರಿಯ ದೂರವಾಣಿಯಲ್ಲಿ ಮಾತನಾಡಿದ್ದು ೧೬ ಗಂಟೆ. ಅಂದ್ರೆ ೫ ಪಟ್ಟು. ಎಷ್ಟೋ ಜನ ಮಿತ್ರರಿಗೆ ನನ್ನ ಧ್ವನಿ ಮರೆತು ಹೋಗಿರಬಹುದೇನೋ? ಅಥವಾ ಅವ್ರು ಫೋನ್ ಮಾಡಿದರೆ ಅವರ ಧ್ವನಿ ನಾನು ಗುರುತಿಸಬಹುದ? ಗೊತ್ತಿಲ್ಲ. ಈ ಕೆಲವು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ಹಂಚಿಕೊಂಡು ಮಿತ್ರರು ಎಲ್ಲಿದ್ದರೋ ಏನಾಗಿದ್ದರೋ ಒಂದು ಗೊತ್ತಿಲ್ಲ. ಈ ಯಾಂತ್ರಿಕ ಬದುಕು ಮುಗಿಸಿ ನಿವೃತ್ತನಾಗಿ ಮನೆಗೆ ಹೋದಾಗ ಯಾರಾದ್ರೂ ಜೊತೆ ಮಾತಾಡಬೇಕು ಅಂದ್ರೆ ಅದಕ್ಕೆ ದಾರಿ ಇದೆಯಾ? ಗೊತ್ತಿಲ್ಲ. ಈ ಕಸ್ಟಮರ್ ಕಾಲ್ ಅನ್ನೋದು ನಿವೃತ್ತಿ ಹೊಂದಿದ ಮೇಲೆ ನಿಂತು ಹೋಗುತ್ತೆ. ಮುಂದೆ? ಗೊತ್ತಿಲ್ಲ. ನಮ್ಮ ತಾತ ಮುತ್ತತರು, ಊರ ಮೇಲಿನ ಕಟ್ಟೆ, ಕೆರೆ ತೋಟ ಅಂತ ಏನೇನೋ ಸ್ಥಳಗಳನ್ನು ಮಾಡಿಕೊಂಡಿದ್ರು. ಆದ್ರೆ ನಾವು ಮಾಡಿಕೊಂಡಿರೋದು ಕೆಲಸಕ್ಕೆ ಬರದೆ ಇರೋ facebook orkut ಗಳು. ಇವೆಲ್ಲ ಇರದೇ ಇದ್ದ ಪಕ್ಷ ಜೀವನ ಹೇಗೆ ಅಂತ ಈವತ್ತಿನ ಯುವಕರನ್ನು ಕೇಳಿದ್ರೆ, ಮತ್ತೆ ಉತ್ತರ ಗೊತ್ತಿಲ್ಲ.
ಈ ಅನೇಕ ಗೊತ್ತಿಲ್ಲಗಳಿಗೆ ಉತ್ತರ ಸಿಗಬೇಕಾದರೆ ಇನ್ನು ೩೦ ವರ್ಷ ಕಾಯಬೇಕು ನಾನು. ಉತ್ತರ ಗೊತ್ತಾದ ಮೇಲೆ ಅದರ ಬಗ್ಗೆ ಮತ್ತೆ ಬರೀತೀನಿ.
ಈ ಅನೇಕ ಗೊತ್ತಿಲ್ಲಗಳಿಗೆ ಉತ್ತರ ಸಿಗಬೇಕಾದರೆ ಇನ್ನು ೩೦ ವರ್ಷ ಕಾಯಬೇಕು ನಾನು. ಉತ್ತರ ಗೊತ್ತಾದ ಮೇಲೆ ಅದರ ಬಗ್ಗೆ ಮತ್ತೆ ಬರೀತೀನಿ.
:( Uttara nangu gothila!!!
ReplyDeleteGood thought!