ಅದನ್ನ ಗಮನಿಸಿದರೆ ಮಕ್ಕಳಿಗೆ ಬೇಕಾದ ಪ್ರೀತಿ, ಮಮತೆ ತಂದೆಯಿಂದ ಜಾಸ್ತಿ ಸಿಕ್ಕಿದೆ ಅಂತ. ಇಂಥ ಸಂದರ್ಭದಲ್ಲಿ ಆ ಮಗುವಿಗೆ ತಂದೆಯೇ ತಾಯಿ ಆಗ್ತಾನೆ. ಯಾರು ಮಮತೆ, ಪ್ರೀತಿ, ಅನುಕಂಪ, ದಯೆ ಈ ಎಲ್ಲ ಗುಣಗಳನ್ನು ಹೊಂದಿರ್ತಾರೋ ಅವರಿಗೆ ತಾಯಿ ಅಂತ ಸಂಬೋಧಿಸುವುದರಲ್ಲಿ ತಪ್ಪೇನಿಲ್ಲ. ಇದ್ದಕ್ಕಿದ್ದ ಹಾಗೆ ಹೀಗೆ ವಿಚಾರ ಮಾಡೋಕೆ ಅನುವು ಮಾಡಿಕೊಟ್ಟ ಕೆಲವು ಘಟನೆಗಳು, ವ್ಯಕ್ತಿಗಳನ್ನ ನಾನು ನೋಡಿದ್ದೇನೆ.
ನಾನು ಚೀನಾಗೆ ಬಂದ ದಿನದಿಂದ ನನಗೆ ಸಸ್ಯಾಹಾರದ ಊಟವನ್ನು ತರಿಸಿರ್ತಾರೆ. ಮಧ್ಯನ್ನ ನಾನು ಕ್ಯಾಂಟೀನ್ ನಲ್ಲಿ ಕಾಲು ಇಡುವುದೇ ತಡ, ಒಬ್ಬ ಹಸನ್ಮುಖಿ ಸುಮಾರು ೪೦-೪೫ ವಯಸ್ಸು ಇರಬೇಕು ಆ ಹೆಣ್ಣುಮಗಳಿಗೆ ಓಡಿ ಹೋಗಿ ನನಗಾಗಿ ಪ್ರತ್ಯೇಕವಾಗಿ ಇಟ್ಟಿದ್ದ ಒಂದು ಹಾಟ್ ಕೇಸ್ ನಿಂದ ಊಟ ತೆಗೆದು ಕೊಡುತ್ತಾಳೆ. ನಾನು ಊಟ ತೆಗೆದುಕೊಂಡು "ಶಿಷಾ" ಚೀನಾ ಭಾಷೆಯಲ್ಲಿ "thank you" ಅಂತ ಹೇಳ್ತೀನಿ. ನನೆನಾದ್ರು, ಹಾಲಿನ ಗ್ಲಾಸ್ ತೊಗೊಲ್ಲದೆ ಬಂದ್ರೆ ಅವಳೇ ಬಂದು ಕುಡೀರಿ ಅಂತ ಹೇಳ್ತಾಳೆ. ಅವಳಿಗೂ ಇಂಗ್ಲಿಷಿಗೂ ತುಂಬಾ ದೂರ. ನಮ್ಮ ಮಾತುಗಲೇನೆ ಇದ್ದರು, ಬರೀ ನಗುವಿನಲ್ಲೇ. ಅದೇನೋ ಗೊತ್ತಿಲ್ಲ, ಅವಳ ಮುಖ ನೋಡಿದಾಗಲೆಲ್ಲ ಏನೋ ಒಂಥರಾ ಖುಷಿ ನನಗೆ. ಅವಳ ಮುಖದಲ್ಲಿನ ಆ ಸಂತೃಪ್ತ ಮನೋಭಾವ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಅದೇನು ಪರದೇಶದಿಂದ ಬಂದ ನನ್ನ ಮೇಲೆ ಅನುಕಂಪವೋ, ಅಥವಾ ಅತಿಥಿ ಸತ್ಕಾರದ ಪರಮಾವಧಿಯೋ ಒಂದು ಗೊತ್ತಿಲ್ಲ. ನನಗೆ ಗೊತ್ತಿಲ್ಲದೇ ಊಟ ಮಡಿ ಬರುವಾಗ ನನ್ನ ಕೈಗಳು ಅವಳನ್ನ ನಮಸ್ಕರಿಸುತ್ತವೆ. ನಮ್ಮಲ್ಲಿ ಅನ್ನದಾತ ಸುಖೀಭವ ಅನ್ನೋ ಮಾತು ಪ್ರತೀ ಬಾರಿ ಊಟ ಮಾಡಿದಾಗಲೂ ಹೇಳ್ತಾರೆ. ಆದ್ರೆ ಅದರ ನಿಜವಾದ ಅರ್ಥ ಗೋಚರಿಸಿದ್ದು ಈ ಕೆಲವು ದಿನಗಳಲ್ಲಿ. ಎಲ್ಲೋ ಹುಟ್ಟಿ, ಸಂಬಂಧವೇ ಇಲ್ಲದ ನನಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಈ ರೀತಿಯ ಮಮತೆಯನ್ನು ತೋರಿದ ಇವಳಿಗೆ ತಾಯಿ ಅನ್ನದೆ ಏನೆನ್ನಲಿ?
ಎಲ್ಲ ತಾಯಿ ಮನಸ್ಸಿನವರಿಗೂ ಕೋಟಿ ಕೋಟಿ ನಮನ..
ಮತ್ತೆ ಮಾತಾಡೋಣ...
Ahhhhhhhhhh awesome writing, My eyes were filled by the time I finished reading this
ReplyDeleteKeep them coming!