ನಾನು ಚಿಕ್ಕವನಾಗಿದ್ದಾಗಿಂದ, ಯಾರದ್ರೂ ಹಾಸಿಗೆ ಹಿಡಿದು ಇನ್ನೇನು ಕೆಲವೇ ದಿನಗಳಲ್ಲಿ ಅವರಿಗೆ ಟಿಕೆಟ್ ಸಿಗುತ್ತೆ ಅಂತ ದಾರಿ ಕಾಯೋರು, ಹೇಳಿದ ಕೆಲವು ಮಾತುಗಳು ನೆನಪಾದವು. "ನಾನು ಸತ್ತ ಮೇಲೆ ನನ್ನ ಬಾಯಿಗೆ ಆ ಗಂಗಾಜಲ ಹಾಕೋದನ್ನ ಮರೀಬೇಡಿ". ಇಷ್ಟೇ ಅಲ್ಲ, ಇನ್ನು ಕೆಲವರು ಗಂಗಾಜಲವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿರುತ್ತಾರೆ. ಅನಾದಿಕಾಲದಿಂದಲೂ ಈ ಪದ್ಧತಿ ಜಾರಿಯಲ್ಲಿದ್ದು, ಇನ್ನೂ ಕೂಡ ಜನ ಇದನ್ನ ನಂಬುತ್ತಾರೆ. ಸಾಯೋ ಸಮಯದಲ್ಲಿ ಗಂಗಾಪಾನ ಮಾಡಿದರೆ ಸ್ವರ್ಗ ಪ್ರಾಪ್ತಿ ಆಗುತ್ತೆ ಅನ್ನೋದು ಅವರ ಖಯಾಲಿ. ಅದೇನೇ ಇರಲಿ, ನನಗೆ ಹೊಳೆದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕೋ ಪ್ರಯತ್ನ ಮಾಡಿದೆ. ಈ ಸ್ವರ್ಗ ಅನ್ನೋದು ಇದೆಯಾ? ಅಕಸ್ಮಾತ್ ಇದೆ ಅನ್ನೋದೇ ಆದ್ರೆ ಪುಣ್ಯ ಮಾಡಿದವರಿಗೆ ಮಾತ್ರ ಅಲ್ಲಿ ಜಾಗ ಇದೆಯಾ? ಹಾಗೆನದ್ರೂ ಬರೀ ಪುಣ್ಯವಂತರಿಗೆ ಮಾತ್ರ ಅಲ್ಲಿ ಜಾಗ ಇದೆ ಅನ್ನೋ ಹಾಗಿದ್ರೆ, ದೇವರಾಣೆ ಹೇಳ್ತೀನಿ ಅದು ಖಾಲಿ ಗೋಡೌನ್ ಥರ ಇರುತ್ತೆ. ಯಾಕೆಂದ್ರೆ ಪಕ್ಕಾ ಪುಣ್ಯವಂತರು ಅಂತ ಯಾರೂ ಇಲ್ಲ. ಸರ್ವೇ ಜನಃ ಸುಖಿನೋ ಭವಂತು ಅನ್ನೋರು ಎಷ್ಟು ಜನ ಇದ್ದಾರೆ? ಎಲ್ಲರೂ ಒಂದಲ್ಲ ಒಂದು ರೀತಿ ತಪ್ಪು ಮಾಡಿರುತ್ತಾರೆ. ದೇವರಿಗೆ ದುಡ್ಡು ಕೊಟ್ಟು ಶಾಂತಿ ಮಾಡಿಸಿ, ಪಾಪ ಕಳೆದುಹೋಯಿತು ಅನ್ನೋ ಸುಳ್ಳು ಭರವಸೆ ಕೊಡೋಪ್ರಯತ್ನ ಮಾಡುತ್ತಾರೆ. ಆದ್ರೆ ಪಾಪಪ್ರಜ್ಞ್ಯೇ ಅನೋದು ಯಾವ ಶಾಂತಿ ಮಾಡಿದರು ಹೋಗಲಾರದು. ಪಾಪ ಪ್ರಜ್ನ್ಯೆ ಇಲ್ಲದವನೇ ನನ್ನ ಲೆಕ್ಕದಲ್ಲಿ ಪರಮ ಪಾಪಿ. ಇರೋವರೆಗೂ ಎಲ್ಲರನ್ನ ಬೈಕೊಂಡು, ಸತಾಯಿಸಿಕೊಂಡು, ಸ್ವಾರ್ಥದ ಬದುಕು ನಡೆಸೋ ನಾವು, ಕೊನೆಗಾಲದಲ್ಲಿ ಮಾತ್ರ ಗಂಗಾಜಲ ನಮ್ಮ ಬಾಯಿಗೆ ಹಾಕ್ಕೊಂಡು ಸ್ವರ್ಗದ ಆಸೆ ಕಾಣ್ತೀವಿ. ಅಲ್ಲೂ ಕಾಣುವುದು ಸ್ವಾರ್ಥ ಮತ್ತು ಆಸೆ. ಸತ್ತ ಮೇಲು ಕೂಡ ನಾನು ಸಂತೋಷದಿಂದ ಇರಬೇಕು ಅನ್ನೋ ದುರಾಸೆ!!! ಮೇಲೆ ಹೇಳಿದ ಹಾಗೆ, ಸಾಯೋವಾಗ ಪಕ್ಕದಲ್ಲಿ ಗಂಗಾಜಲ ಏನೋ ಇಟ್ಟುಕೊತೀವಿ, ಆದ್ರೆ ಅದನ್ನ ಬಾಯಿಗೆ ಸುರಿಯೋಕೆ ಒಂದು ಕೈ ಕೂಡ ಇಲ್ಲದ ಹಾಗೆ ಬಾಳು ನಡೆಸಿರ್ತೀವಿ. ಹಾಗೆನದ್ರು ಕೈಗಳನ್ನ ಘಳಿಸಿದ್ದೇ ಆದ್ರೆ, ಗಂಗಾಜಲದ ಅಗತ್ಯ ಇಲ್ಲ ಅನ್ನಿಸುತ್ತೆ.
ಜೀವಿತಾವಧಿಯಲ್ಲಿ ಒಳ್ಳೆ ಕೆಲಸ ಮಾಡಿ, ಆ ಪರಮ ಸಂತೋಷವನ್ನು ಇಲ್ಲಿಯೇ ಕಾಣುವ ಬದಲು, ಸ್ವರ್ಗ ಸತ್ತ ಮೇಲೆ ಸಿಗುತ್ತದೆ ಅನ್ನೋದು ಭ್ರಮೆಯಲ್ಲದೇ ಇನ್ನೇನು?
ನೀವು ಸ್ವರ್ಗ ಸೃಷ್ಟಿಸಿ. ಸ್ವರ್ಗಕ್ಕೆ ಹಾತೊರೆಯದಿರಿ.
ಮತ್ತೆ ಸಿಗ್ತೀನಿ......
Loved the last line yes we have to create heaven around!!!
ReplyDeletegood one!
This one is really beautiful. I think all of us should realize now at least. Its not too late. kone ghaLigeyalli naalakku jana nammanna gurutisoru illa andare adarashtu paapi janma innilla antini.
ReplyDelete