Sunday, December 23, 2012

ಆಯ್ದ ಕವನಗಳು



ಕಲ್ಪನೆಯ ದಾರಿ


ದೇಹಕ್ಕೊಂದು ಮನಸು... ಮನಸಿಗೆ ಹಲವು ಕನಸು...

ಕನಸಿಗೊಂದು ಕಲ್ಪನೆ.... ಕಲ್ಪನೆಗೊಂದು ದಾರಿ....

ಆ ದಾರಿಯ ಪಯಣಿಗ ನಾ...

ನನ್ನ ಕಲ್ಪನೆಗೆ ಕೊನೆಯಿಲ್ಲ... ಕನಸಿಗೆ, ಅಂತ್ಯವಿಲ್ಲ.

                        

ನೆನಪು ಸತ್ತಾಗ
                                                           
ಮನುಷ್ಯ ಸತ್ತಾಗ... ನೆನಪಾಗಿ ಉಳಿಯುತ್ತಾನೆ.

ಅದೇ ನೆನಪು ಸತ್ತಾಗ?

ತುಂಬಾ ಯೋಚಿಸಬೇಡಿ, ನೆನಪು ಸಾಯೋದಿಲ್ಲ...







ಆಸೆಗಳು

ಆಸೆಗಳ ಗಂಟನ್ನು ಹೊತ್ತು ಮಾರುತ್ತಿರುವ ವರ್ತಕ ನಾನು

ಅದೇ ಆಸೆಗಳ ಗಂಟಲ್ಲಿ ಒಂದನ್ನೂ ನಾ ಕೊಳ್ಳಲಾರೆ.

ಮಾರುವುದರಲ್ಲಿ ಇರೋ ಲಾಭ ಕೊಳ್ಳೋದ್ರಲ್ಲಿ ಇದೆಯಾ?

                        


                                                                 

ನಾನ್ಯಾರು?
                   
ನಾನ್ಯಾರು ಎಂಬ ಪ್ರಶ್ನೆಗಿನ್ನೂ ಉತ್ತರ ಸಿಕ್ಕಿಲ್ಲ.

ನಾನೇನು ಎನ್ನುವುದು ನನಗಿನ್ನೂ ತಿಳಿದಿಲ್ಲ.

ಜೀವನ ಪಯಣ ನಡೆಯುತಿದೆ ಈ ಎರಡು ಉತ್ತರಗಳ ಹುಡುಕಾಟದಲಿ.

2 comments:

  1. ಪ್ರತಿಯೊಂದು ಕವನವೂ ವಿಭಿನ್ನವಾಗಿದೆ.. ಕೊನೆಯ ಕವನವಂತೂ ಹಲವರ ಬದುಕಿನ ಸ್ಥೂಲ ಚಿತ್ರಣದಂತೆ ತೋರಿತು. ಉತ್ತಮ ರಚನೆ ಹಾಗೂ ಸಂಗ್ರಹ. ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು :o)

    ReplyDelete
  2. Beautiful composition each one with profound meaning in it! :) Though our views on life is different :) I should tell you the way you think and put it on paper is mesmerizing!

    hegala :D desitnation vonde"full life" aadru Bere bere doni payanigru naavu

    ReplyDelete